
ಹ್ಯಾಪಿ ಬರ್ತಡೆ ಮೋದಿಜಿ
ಆದರಣೀಯ ಮೋದಿಜಿ, ಮೊದಲನೆಯದಾಗಿ G20 ಸಮಾವೇಶದ ಮೂಲಕ ಭಾರತದ ಗೌರವವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದಕ್ಕೆ ಎಲ್ಲ ದೇಶವಾಸಿಗಳ ಪರವಾಗಿ ಧನ್ಯವಾದಗಳು. ಇದೇ ಸೆಪ್ಟೆಂಬರ್17 ಕ್ಕೆ ಎಪ್ಪತ್ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ದಿನಕ್ಕೆ 18 ಗಂಟೆಗಳ ಕಾಲ ನಮಗಾಗಿ ಕೆಲಸ ಮಾಡಿದ್ದೀರಿ. ಬಹುಶಃ ಇದೇ ಕಾರಣಕ್ಕಾಗಿ ಯಾವ ರಾಜಕಾರಣಿಯೂ ಕೇಳದಷ್ಟು ಬೈಗುಳಗಳನ್ನು ರಾಜಕೀಯ ವಿರೋಧಿಗಳಿಂದ ಕೇಳಿದ್ದೀರಿ ಮತ್ತು ಬೈಗುಳದ ಸಾವಿರಪಟ್ಟು ಹೆಚ್ಚು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆದಿದ್ದೀರಿ. ರಾಜಕೀಯದ ಗಂಧಗಾಳಿಯೂ ಕೇಳಿರದ ಮಕ್ಕಳೂ ಟಿವಿಯ ಪರದೆಯ ಮೇಲೆ ನಿಮ್ಮನ್ನು…