Activities

All event times are displayed based on Asia/Kolkata timezone.
favorite_border
Sat, 14 Oct
ಚಿತ್ರದುರ್ಗದಿಂದ ಹೊರಟ ಯಾತ್ರೆ ನಿನ್ನೆ ಚಳ್ಳಕೆರೆ, ಹಿರಿಯೂರು, ಶಿರಾ ಮಾರ್ಗಗಳನ್ನು ಕ್ರಮಿಸಿ ತುಮಕೂರಿಗೆ ಬಂತು. ತುಮಕೂರಿನಲ್ಲಿ ಬೈಕ್ ರ್ಯಾಲಿಯ ಮೂಲಕ ಶ್ರೀರಾಮಮಂದಿರದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಲಾಯ್ತು. ಮುಂದೆ ದಾಬಸ್‌ಪೇಟೆಯ ಮೂಲಕ ನೆಲಮಂಗಲಕ್ಕೆ ಬಂದು ಕಾರ್ಯಕರ್ತರೊಂದಿಗೆ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿ, ದಾಸರಹಳ್ಳಿ, ರಾಜಾಜಿನಗರಗಳಲ್ಲಿ ಸ್ವಾಗತ ಸ್ವೀಕರಿಸಿ ಮೆಜೆಸ್ಟಿಕ್‌ನ ಬಳಿಯ ನಾಗರಕಟ್ಟೆಯ ಹಿಂಭಾಗದ ಕ್ರೀಡಾಂಗಣದಲ್ಲಿ ಉದ್ದೇಶಿತ ಬೈಕ್ ರ್ಯಾಲಿಗೆ ಮಂಗಳ ಹಾಡಲಾಯ್ತು
favorite_border
Fri, 13 Oct
ನಿನ್ನೆ ಹಾವೇರಿಯಿಂದ ಹೊರಟು ಮೋಟೆಬೆನ್ನೂರಿನ ಮೂಲಕ ರಾಣೆಬೆನ್ನೂರು ಸೇರಿಕೊಂಡೆವು. ರಾಣೆಬೆನ್ನೂರಿನಲ್ಲಿ ಕಾರ್ಯಕರ್ತರೊಂದಿಗೆ ಬೆಳಗಿನ 8 ಗಂಟೆಯ ವೇಳೆಗೆ ರ್ಯಾಲಿ ನಡೆಸುತ್ತಾ, ರಾಣೆಬೆನ್ನೂರ್ ಕಾ ರಾಜಾ ಗಣಪತಿಯ ಸಂದರ್ಶನ ಮಾಡಲಾಯ್ತು. ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸುವ ಮೂಲಕ ಪ್ರತಿನಿತ್ಯ ಸಾವಿರಾರು ಮಂದಿಯನ್ನು ಆಕರ್ಚಿಸುತ್ತಿರುವ ಈ ಸ್ಥಳ ನಿಜಕ್ಕೂ ಈ ಹೊತ್ತಿನಲ್ಲಿ ಪ್ರೇರಣಾದಾಯಿಯಾಗಿತ್ತು.‌ಅಲ್ಲಿಂದ ಮುಂದೆ ದಾವಣೆಗೆರೆ. ನಮೋಬ್ರಿಗೇಡ್‌ನ ರಾಜ್ಯಸಂಚಾಲಕರ ಸ್ವಕ್ಷೇತ್ರವಾದ್ದರಿಂದ ಸಹಜವಾಗಿಯೇ ಅಪೇಕ್ಷೆ ಹೆಚ್ಚಿತ್ತು. ಅದಕ್ಕೆ ಪೂರಕವಾಗಿ ಈ ಯಾತ್ರೆಯ ಅತಿ ಉದ್ದನೆಯ ಬೈಕ್ ರ್ಯಾಲಿ ದಾವಣಗೆರೆಯಲ್ಲಿ ನಡೆದು, ಅಮರ್ ಜವಾನ್ ಸ್ಮಾರಕದಲ್ಲಿ ಸಮಾರೋಪಗೊಂಡಿತು. ಅಲ್ಲಿಂದ ಮುಂದೆ ನ್ಯಾಮತಿಯ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದೆವು. ಶಿವಮೊಗ್ಗದಲ್ಲಿ ಇತ್ತೀಚಿನ ಗಲಾಟೆಗಳ ನಂತರದ ಮೊದಲ ರ್ಯಾಲಿ ಇದಾಗಿದ್ದು ಜನರ ಉತ್ಸಾಹ ಎಲ್ಲೆ ಮೀರಿತ್ತು. ಊರಿನುದ್ದಕ್ಕೂ ಸಾಗಿದ‌ ಮೆರವಣಿಗೆ ಪಟೇಲ್ ಸಮಾಜ ಭವನದಲ್ಲಿ ಮುಕ್ತಾಯಗೊಂಡಿತು. ಅಲ್ಲಿಂದ ಮುಂದೆ ಚೆನ್ನಗಿರಿ, ಹೊಳಲ್ಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದಾಗ ಸಂಜೆಯಾಗಿತ್ತು. ದುರ್ಗದಲ್ಲಿ ಬೈಕ ರ್ಯಾಲಿ ಮತ್ತು ಸಾರ್ವಜನಿಕ ಕಾರ್ಯಕ್ರಮ. ತರಾಸು ಸಭಾಂಗಣದಲ್ಲಿ ಸೇರಿದ್ದ ನೂರಾರು ಜನರಿಗೆ…
favorite_border
Thu, 12 Oct
ಕೊಪ್ಪಳದಿಂದ ಶುರುವಾದ #ಜನ_ಗಣ_ಮನ_ಬೆಸೆಯೋಣ ಯಾತ್ರೆ ಲಕ್ಕುಂಡಿಯಲ್ಲಿ ಸ್ವಾಗತವನ್ನು ಸ್ವೀಕರಿಸಿ ಬೆಟಗೇರಿ, ಗದಗಗಳನ್ನು ರ್ಯಾಲಿಯ ಮೂಲಕ ಸಂದರ್ಶಿಸಿ ಅಣ್ಣಿಗೇರಿಯಲ್ಲಿ ದೊಡ್ಡ ಸಂಖ್ಯೆಯ ತರುಣರನ್ನು ಕೂಡಿಸಿಕೊಂಡಿ ಹುಬ್ಬಳ್ಳಿಯತ್ತ ತೆರಳಿತು. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕರ್ತೃ ಗದ್ದುಗೆಗೆ ನಮನ ಸಲ್ಲಿಸಿ ಆರೆಂಟು ಕಿಲೊಮೀಟರ್‌ಗಳ ರ್ಯಾಲಿಯನ್ನು ಕ್ರಮಿಸಿ, ಸಿದ್ಧಾರೂಢರ ಮಠದಲ್ಲಿ ಸಂಪನ್ನವಾಯ್ತು. ಸಂಜೆ ಶಿಗ್ಗಾಂವಿಯಲ್ಲಿ ಬೈಕ್ ರ್ಯಾಲಿ, ಅಲ್ಲಿಂದ ಹಾವೇರಿಯತ್ತ ಪಯಣ. ಹಾವೇರಿಯಲ್ಲಿ ತರುಣರ ದೊಡ್ಡದ್ದೊಂದು ಸಮೂಹವನ್ನು ಸೇರಿಸಿಕೊಂಡು ದೇವಗಿರಿಗೆ ಪಯಣ ಬೆಳೆಸಿದರು. ಈ ಹಳ್ಳಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನರೇಂದ್ರಮೋದಿ ಅವರ ಸಾಧನೆಗಳನ್ನು ಹಂಚಿಕೊಳ್ಳಲಾಯ್ತು. ಹಳ್ಳಿಯಲ್ಲೂ ಸಹ ಜನರ ಉತ್ಸಾಹ ನಮ್ಮನ್ನೇ ಬೆಚ್ಚಿ‌ಬೀಳಿಸುವಂತಿತ್ತು. ಇಂದು ಪಯಣ ಚಿತ್ರದುರ್ಗದತ್ತ..
favorite_border
Wed, 11 Oct
ನಿನ್ನೆ ಸಿಂಧನೂರಿನಿಂದ ಆರಂಭವಾದ #ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿ ಸಿರುಗುಪ್ಪವನ್ನು ದಾಟಿ ಬಳ್ಳಾರಿಗೆ ಬಂತು. ಬಳ್ಳಾರಿಯಲ್ಲಿ ಕುಂಬಾರ, ನೇಕಾರ ಮತ್ತು ವಿಶ್ವಕರ್ಮ ಸಮುದಾಯದೊಂದಿಗೆ ನರೇಂದ್ರಮೋ‌ದಿ ಅವರ ಅಗತ್ಯತೆಯ ಕುರಿತಂತೆ ಸಂವಾದ ನಡೆಸಲಾಯ್ತು. ಆನಂತರ ಬಳ್ಳಾರಿಯ ಬೈಕ್ ರ್ಯಾಲಿಯಲ್ಲಿ ನೂರಾರು ಜನ ಸೇರಿ ಯಾತ್ರೆಯನ್ನು ಸುಂದರಗೊಳಿಸಿದರು. ಅಲ್ಲಿಂದ ಮುಂದೆ ತೋರಣಗಲ್ಲಿಗೆ ಬಂದು ವಿಶೇಷವಾದ ತರುಣರಿಂದಲೇ ಕೂಡಿದ ಬೈಕ್ ರ್ಯಾಲಿಯನ್ನು ಕುರೇಕುಪ್ಪದವರೆಗೂ ಒಯ್ಯಲಾಯ್ತು. ಆ ಹಳ್ಳಿಯಲ್ಲಿ ಮೋದಿಯವರ ಕುರಿತಂತೆ ಕೇಳಲು ಜನ ಉತ್ಸಾಹದಿಂದ ನೆರೆದಿದ್ದರು. ಮುಂದೆ ಕಮಲಾಪುರ-ಹಂಪಿಗಳಲ್ಲಿ ನೂರಾರು ಮಂದಿಯ ಬೈಕ್ ರ್ಯಾಲಿ ಹೊಸಪೇಟೆಯವರೆಗೂ ಜೊತೆಗೂಡಿತು. ಹೊಸಪೇಟೆಯಲ್ಲಂತೂ ಪ್ರತಿ ವೃತ್ತದಲ್ಲೂ ಜನ ಪ್ರೀತ್ಯಾದರಗಳಿಂದ ಸ್ವಾಗತಿಸಿದರು. ಭಾರತಮಾತೆಯ ಮತ್ತು ಮೋದಿಯ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ದಾರಿಯುದ್ದಕ್ಕೂ ಅನೇಕ ಪ್ರತಿಮಗಳಿಗೆ ಮಾಲಾರ್ಪಣೆ ಮಾಡುತ್ತಾ ಕೊನೆಯಲ್ಲಿ ಬೃಹತ್ತಾಗಿರುವ ಆಂಜನೇಯನ ಪ್ರತಿಮೆಯಡಿ ನಿಂತು ಜನರನ್ನುದ್ದೇಶಿಸಿ ಮಾತನಾಡಲಾಯ್ತು. ಅಲ್ಲಿಂದ ಮುಂದೆ ಕೊಪ್ಪಳದೆಡೆಗೆ ಯಾತ್ರೆ. ಅಲ್ಲಿಯೂ ದೊಡ್ಡಮಟ್ಟದ ತರುಣರ ಪಡೆ ಕಾಯುತ್ತಾ ಇತ್ತು. ಅಲ್ಲಿ ಮೆರವಣಿಗೆ ಮುಗಿಸಿ, ಕಿಕ್ಕಿರಿದು ಸೇರಿದ್ದ ಜನರ ನಡುವೆ ಬೃಹತ್ತಾದ…
favorite_border
Tue, 10 Oct
ನಿನ್ನೆ ಯಾದಗಿರಿಯಿಂದ ಹೊರಟ #ಜನ_ಗಣ_ಮನ_ಬೆಸೆಯೋಣ ಯಾತ್ರೆ ಖಾನಾಪುರದಲ್ಲಿ ಸ್ವಾಗತವನ್ನು ಸ್ವೀಕರಿಸಿ ಸುರಪುರ ಸೇರಿತು. ವೆಂಕಟಪ್ಪ ನಾಯಕನ ಅರಮನೆಯನ್ನು ಸಂದರ್ಶಿಸಿ, ತಿಂಥಣಿ ಕ್ರಾಸ್, ಗುರುಗುಂಟಾ ಮತ್ತು ಯರಡೋನಾಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಲಿಂಗಸುಗೂರಿಗೆ ಬಂತು. ಅಲ್ಲಿ ನೆರೆದಿದ್ದ ತರುಣ ಮಿತ್ರರೊಂದಿಗೆ ಚರ್ಚೆ ನಡೆಸಲಾಯ್ತು. ಮಸ್ಕಿಯಲ್ಲೂ ಇದೇ ರೀತಿಯ ವಾತಾವರಣ. ನಿನ್ನೆ ಸಂಜೆ ಸಿಂಧನೂರಿನಲ್ಲಿ ಬೈಕ್ ರ್ಯಾಲಿ ಮುಗಿಸಿ ಜನರೊಂದಿಗೆ ಸಂವಾದ ನಡೆಸಲಾಯ್ತು. ಇಂದು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳಗಳ ಭೇಟಿ.
favorite_border
Mon, 09 Oct
ನಿನ್ನೆ ಬೆಳಿಗ್ಗೆ ಬೀದರ್‌ನ ಗುರುದ್ವಾರದಿಂದ ಲಂಗರ್‌ನ ಪ್ರಸಾದ ಸ್ವೀಕರಿಸಿ ಹೊರಟ ಯಾತ್ರೆ ಕಮಠಾಣ, ಮನ್ನಾಎಖೇಳ್ಳಿ, ಮಿನಖೇರಾ, ಚಾಂಗ್‌ಲೇರಾ, ತುಮಕುಂಟಾಗಳಲ್ಲಿ ಸ್ವಾಗತ ಸ್ವೀಕರಿಸಿ ಚಿಂಚೋಳಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಶೌರ್ಯ ಯಾತ್ರೆಯೊಂದಿಗೆ ಬೆಸೆದಿತ್ತು. ಅಲ್ಲಿ ಹಿಂದುತ್ವದ ಜಾಗೃತಿಗಾಗಿ ಈಗ ಭಾರತದಲ್ಲಿ ನಡೆಯುತ್ತಿರುವ ಕಾರ್ಯಗಳ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಯ್ತು. ಅಲ್ಲಿಂದ ಮುಂದೆ ಸುಲೇಪೇಟ್, ತೆಕ್ಕಲಕೋಟೆ ಮತ್ತು ಬಿಬ್ಬಳ್ಳಿ ಕ್ರಾಸ್‌ಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸೇಡಂನಲ್ಲಿ ಬೈಕ್ ರ್ಯಾಲಿಯ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯ್ತು. ಅಲ್ಲಿಂದ ಮುಂದೆ ಗಂಗಾನಗರ, ಭೀಮಳ್ಳಿ ಕ್ರಾಸ್‌ಗಳಲ್ಲಿ ತಾಂಡಾದ ತಾಯಂದಿರಿಂದ ಪ್ರೀತ್ಯಾದರಗಳನ್ನು ಸ್ವೀಕರಿಸಿ ಯಾದಗಿರಿಗೆ ಬಂತು. ಯಾದಗಿರಿಯಲ್ಲಿ ನೂರಾರು ಬೈಕ್‌ಗಳ ಭರ್ಜರಿ‌ ಮೆರವಣಿಗೆ ಮತ್ತು ವಿಶೇಷ ಕಾರ್ಯಕ್ರಮ. ಇಲ್ಲಿ ನರೇಂದ್ರಮೋದಿ ಅವರ ಸಾಧನೆಗಳ ಕುರಿತಂತೆ ಜನರೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಒಂದಂತೂ ಸತ್ಯ, ಮೋದಿ ಮಾಡಿದ ಕೆಲಸಗಳು ನಾಡಿನ ಮೂಲೆ ಮೂಲೆಗೂ ತಲುಪಿವೆ. ಅದನ್ನು‌ ನೆನಪು ಮಾಡಿಸುವುದಷ್ಟೆ ನಮ್ಮ ಕೆಲಸ. ಬರೆದಿಟ್ಟುಕೊಳ್ಳಿ ಕಾಂಗ್ರೆಸ್ಸಿಗೆ ನಿಜಕ್ಕೂ ಈ ಬಾರಿಯ ಫಲಿತಾಂಶ ಆಘಾತ ತರಲಿದೆ
favorite_border
Sun, 08 Oct
ನಮ್ಮ ಯಾತ್ರೆ ಮೊನ್ನೆ ಬಬಲೇಶ್ವರದಿಂದ ಹೊರಟು, ಬಿಜಾಪುರದ ಬೈಕ್ ರ್ಯಾಲಿ ಮುಗಿಸಿಕೊಂಡು ಸಿಂದಗಿಯತ್ತ ತೆರಳಿತು. ದಾರಿಯುದ್ದಕ್ಕೂ ಮಹಲ್, ದೇವರ ಹಿಪ್ಪರಗಿ, ರಾಂಪುರ, ಕಲಹಳ್ಳಿ, ಕೊರಹಳ್ಳಿ, ದೇವಣಗಾಂವ್‌, ಆತನೂರು, ಚೌಡಾಪುರಗಳಲ್ಲೆಲ್ಲ ಸ್ವಾಗತವನ್ನು ಸ್ವೀಕರಿಸಿ ಸಂಭ್ರಮಿಸಿತು. ಸಿಂದಗಿಯಲ್ಲಂತೂ ತರುಣರ ಗಡಣವೇ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿತಲ್ಲದೇ ಸಂಗಮೇಶ್ವರ ದೇವಸ್ಥಾನದಲ್ಲಿ ಸಭೆಯಲ್ಲಿ ಪಾಲ್ಗೊಂಡಿತು. ಅಲ್ಲಿಂದ ಅಫ್ಜಲ್‌ಪುರದಲ್ಲಿ ಮತ್ತಷ್ಟು ತರುಣರ ಸೇರ್ಪಡೆ. ಊರಿನುದ್ದಕ್ಕೂ ಮೋದಿಗೆ ಜಯಘೋಷವನ್ನು ಕೂಗುತ್ತಾ ಯುವಪಡೆ ಸಾಗುತ್ತಿದ್ದರೆ ಜನ ಅಚ್ಚರಿಯಿಂದ ನೋಡುತ್ತಿದ್ದರು. ಈ ಯಾತ್ರೆ ಕಲ್ಬುರ್ಗಿಗೆ ಬರುವ ವೇಳೆಗೆ ಬೈಕ್ ಸವಾರರ ಸಂಖ್ಯೆ ಕಿಕ್ಕಿರಿದು ಸೇರಿತ್ತು. ಮೋದಿಯ ಅಭಿಮಾನಿಗಳಿಗೆ ಅಗತ್ಯವಿದ್ದ ಕಿಡಿಯ ಸ್ಪರ್ಶ ಆಗಿತ್ತು. ವಿಶ್ವಹಿಂದೂ ಪರಿಷತ್‌ನ ಗಣಪತಿಯ ಪೆಂಡಾಲ್‌ನಲ್ಲಿ ವಿಶ್ವಗುರು ಭಾರತದ ಪರಿಪ್ರೇಕ್ಷದಲ್ಲಿ ಮೋದಿಯವರ ಸಾಧನೆಯ ಕುರಿತಂತೆ ನುಡಿಗಳನ್ನು ಕೇಳಲು ಸುಮಾರು ಏಳು ಸಾವಿರದಷ್ಟು ಜನ ಸೇರಿಕೊಂಡಿದ್ದರು. ಅಲ್ಲೊಂದು ಅದ್ಭುತ ಲೋಕವೇ ನಿರ್ಮಾಣಗೊಂಡಿತ್ತು.ನಾವೆಣಿಸಿದ್ದಕ್ಕಿಂತಲೂ #ಜನ_ಗಣ_ಮನ_ಬೆಸೆಯೋಣ ರ್ಯಾಲಿ ಭರ್ಜರಿಯಾಗಿಯೇ ನಡೆಯುತ್ತಿದೆ
favorite_border
Sun, 08 Oct
ನಿನ್ನೆ ಕಲ್ಬುರ್ಗಿಯಿಂದ ಹೊರಟು ಹಳ್ಳಿಖೇಡ ಮಾರ್ಗವಾಗಿ ಜಯಸಿಂಹನಗರಕ್ಕೆ ಬಂದೆವು. ಹಳ್ಳಿಖೇಡದಲ್ಲಿ ಜನರ ಪ್ರೀತಿಯ ಸ್ವಾಗತ. ಜಯಸಿಂಹನಗರದಲ್ಲಿ ಭರ್ಜರಿ ರ್ಯಾಲಿ. ಅಲ್ಲಿಂದ ಬಸವಕಲ್ಯಾಣದಲ್ಲಿ ಸ್ವತಃ ಶಾಸಕರೇ ಬೈಕ್ ರ್ಯಾಲಿಯಲ್ಲಿ ಜೊತೆಗೂಡಿದರು. ಶರಣರ ತಪೋಭೂಮಿಯಾದ ಈ ಸ್ಥಳದಲ್ಲಿ ಬಸವಣ್ಣನವರ ಸ್ಪರ್ಶದಿಂದ ಪುನೀತಗೊಂಡ ಪರುಷಕಟ್ಟೆಗೆ ನಮಿಸುವ ಅವಕಾಶ ನಮಗೆಲ್ಲ ಸಿಕ್ಕಿತು. ಅಲ್ಲಿಂದ ತೊಗಲೂರು ಮಾರ್ಗವಾಗಿ ರಜಾಕಾರರಿಂದ ಸಾಕಷ್ಟು ಹಿಂಸೆಗೊಳಗಾಗಿದ್ದ ಗೊರ್ಟ ಗ್ರಾಮವನ್ನು ತಲುಪಿಕೊಂಡೆವು. ಇಲ್ಲಿ ಅನೇಕ ಹಿರಿಯರು-ತರುಣರನ್ನುದ್ದೇಶಿಸಿ ಮಾತನಾಡುವ ಅವಕಾಶ ನಮಗೆ ದಕ್ಕಿತು. ಅಲ್ಲಿಂದ ಭಾಲ್ಕಿಯಲ್ಲಿ ರ್ಯಾಲಿ ಮತ್ತು ಸಂಜೆ ಬೀದರ್‌ನಲ್ಲಿ ಅಭೂತಪೂರ್ವವಾದ ಸ್ವಾಗತ, ರ್ಯಾಲಿ ಮತ್ತು ಕಾರ್ಯಕ್ರಮ. ಇಂದು ನಮ್ಮ ಪ್ರಯಾಣ ಯಾದಗಿರಿಯತ್ತ
favorite_border
Fri, 06 Oct
ನಿನ್ನೆ ರಾಮದುರ್ಗದಿಂದ ಆರಂಭವಾದ ಯಾತ್ರೆ ದಾರಿಯುದ್ದಕ್ಕೂ ಭವ್ಯ ಸ್ವಾಗತಗಳ ಮೂಲಕ ಬಾದಾಮಿಯನ್ನು ತಲುಪಿತು. ಅಲ್ಲಿಯೂ ನೂರಾರು ಮಂದಿಗೆ ಮೋದಿಯವರ ಅಗತ್ಯವನ್ನು ವಿವರಿಸಲಾಯ್ತು. ಅಲ್ಲಿಂದ ಕೆರೂರು, ಬಟಕುರ್ಕಿ ಮಾರ್ಗವಾಗಿ ಗಲಗಲಿಯನ್ನು ತಲುಪಿ ಸಂಜೆ ಸ್ಥಳೀಯರೊಂದಿಗೆ, ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯಕತೆ ಏನೆಂಬುದನ್ನು ವಿಸ್ತಾರವಾಗಿ ಚರ್ಚಿಸಲಾಯ್ತು. ಅಲ್ಲಿಂದ ಮುಂದೆ ಜನರ ಪ್ರೀತಿಯನ್ನು ಉಣ್ಣುತ್ತ ನಾವು ಸೇರಿದ್ದು ಯಕ್ಕುಂಡಿ ಎಂಬ ಗ್ರಾಮದಲ್ಲಿ. ರಾತ್ರಿ ಒಂಭತ್ತಾದರೂ ಈ ಭಾಗದ ತರುಣರು, ಉದ್ಯಮಿಗಳು, ಬರಹಗಾರರೆಲ್ಲ ಕಾಯುತ್ತ ಕುಳಿತಿದ್ದರು. ಅವರ ಅನೇಕ ಪ್ರಶ್ನೆಗಳಿಗೆ ಉತ್ತರಿಸುವಂತಹ ಕಾರ್ಯಕ್ರಮ ಸುಮಾರು ಒಂದು ಗಂಟೆಗಳ ಕಾಲ ನಡೆದು ಎಲ್ಲರೊಂದಿಗೂ ಸೇರಿ ಸಹಭೋಜನ ಮಾಡಲಾಯ್ತು.ದಿನಕ್ಕೊಂದು ಊರು, ಹೊಸ ಜನ, ಅವರ ಸಂಸ್ಕೃತಿಯೊಂದಿಗೆ ಒಂದಾಗುವ ಅವಕಾಶ. #ಜನ_ಗಣ_ಮನ_ಬೆಸೆಯೋಣ ನಿಜಕ್ಕೂ ಸಾರ್ಥಕವಾಗುತ್ತಿದೆ

All event times are displayed based on Asia/Kolkata timezone.