ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹದಿನೈದನೇ ದಿನ
ನಿನ್ನೆ ಹಾವೇರಿಯಿಂದ ಹೊರಟು ಮೋಟೆಬೆನ್ನೂರಿನ ಮೂಲಕ ರಾಣೆಬೆನ್ನೂರು ಸೇರಿಕೊಂಡೆವು. ರಾಣೆಬೆನ್ನೂರಿನಲ್ಲಿ ಕಾರ್ಯಕರ್ತರೊಂದಿಗೆ ಬೆಳಗಿನ 8 ಗಂಟೆಯ ವೇಳೆಗೆ ರ್ಯಾಲಿ ನಡೆಸುತ್ತಾ, ರಾಣೆಬೆನ್ನೂರ್ ಕಾ ರಾಜಾ ಗಣಪತಿಯ ಸಂದರ್ಶನ ಮಾಡಲಾಯ್ತು. ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸುವ ಮೂಲಕ ಪ್ರತಿನಿತ್ಯ ಸಾವಿರಾರು ಮಂದಿಯನ್ನು ಆಕರ್ಚಿಸುತ್ತಿರುವ ಈ ಸ್ಥಳ ನಿಜಕ್ಕೂ ಈ ಹೊತ್ತಿನಲ್ಲಿ ಪ್ರೇರಣಾದಾಯಿಯಾಗಿತ್ತು.ಅಲ್ಲಿಂದ ಮುಂದೆ ದಾವಣೆಗೆರೆ. ನಮೋಬ್ರಿಗೇಡ್‌ನ ರಾಜ್ಯಸಂಚಾಲಕರ ಸ್ವಕ್ಷೇತ್ರವಾದ್ದರಿಂದ ಸಹಜವಾಗಿಯೇ ಅಪೇಕ್ಷೆ ಹೆಚ್ಚಿತ್ತು. ಅದಕ್ಕೆ ಪೂರಕವಾಗಿ ಈ ಯಾತ್ರೆಯ ಅತಿ ಉದ್ದನೆಯ ಬೈಕ್ ರ್ಯಾಲಿ ದಾವಣಗೆರೆಯಲ್ಲಿ ನಡೆದು, ಅಮರ್ ಜವಾನ್ ಸ್ಮಾರಕದಲ್ಲಿ ಸಮಾರೋಪಗೊಂಡಿತು. ಅಲ್ಲಿಂದ ಮುಂದೆ ನ್ಯಾಮತಿಯ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದೆವು. ಶಿವಮೊಗ್ಗದಲ್ಲಿ ಇತ್ತೀಚಿನ ಗಲಾಟೆಗಳ ನಂತರದ ಮೊದಲ ರ್ಯಾಲಿ ಇದಾಗಿದ್ದು ಜನರ ಉತ್ಸಾಹ ಎಲ್ಲೆ ಮೀರಿತ್ತು. ಊರಿನುದ್ದಕ್ಕೂ ಸಾಗಿದ ಮೆರವಣಿಗೆ ಪಟೇಲ್ ಸಮಾಜ ಭವನದಲ್ಲಿ ಮುಕ್ತಾಯಗೊಂಡಿತು. ಅಲ್ಲಿಂದ ಮುಂದೆ ಚೆನ್ನಗಿರಿ, ಹೊಳಲ್ಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದಾಗ ಸಂಜೆಯಾಗಿತ್ತು. ದುರ್ಗದಲ್ಲಿ ಬೈಕ ರ್ಯಾಲಿ ಮತ್ತು ಸಾರ್ವಜನಿಕ ಕಾರ್ಯಕ್ರಮ. ತರಾಸು ಸಭಾಂಗಣದಲ್ಲಿ ಸೇರಿದ್ದ ನೂರಾರು ಜನರಿಗೆ ನರೇಂದ್ರ ಮೋದಿ ಅವರ ಸಾಧನೆಯನ್ನು ಸಂಪೂರ್ಣವಾಗಿ ವಿವರಿಸಲಾಯ್ತು. ಮುಂದಿನ ದಿನಗಳಲ್ಲಿ ಮೋದಿಗಾಗಿ ಕೆಲಸ ಮಾಡುವ ಭರವಸೆಯನ್ನು ಜನ ಕೊಟ್ಟರು. ಯಾತ್ರೆಯ ಅತಿ ವಿಶಿಷ್ಟವಾದ ಸಂದರ್ಭವೆಂದರೆ ರಾತ್ರಿ ಗಾಂಧಿನಗರದ ದಲಿತ ಸಮುದಾಯದವರೊಂದಿಗೆ ವಿಶೇಷ ಸಂವಾದ ಮತ್ತು ಊಟದ ವ್ಯವಸ್ಥೆ ಇತ್ತು. ಈ ಮಂದಿಯ ರಾಷ್ಟ್ರ ಮತ್ತು ಧರ್ಮ ಪ್ರಜ್ಞೆಯನ್ನು ಕಂಡು ನಾವೆಲ್ಲ ಮೂಕವಿಸ್ಮಿತರಾದೆವು. ಈ ಕೇರಿಯ ಮಂದಿಯೊಂದಿಗೆ ನಮ್ಮ ಸಂಬಂಧ ಬಲಗೊಂಡಂತಾಯ್ತು. ಇಂದು ಯಾತ್ರೆಯ ಕೊನೆಯ ದಿನ. ಬೆಂಗಳೂರಿನ ನಾಗರಕಟ್ಟೆಯ ಬಳಿ ಸಂಜೆ ಬಹಿರಂಗ ಕಾರ್ಯಕ್ರಮ. ಬಿಡುವಿದ್ದರೆ ಬನ್ನಿ
