Activities
11 Oct
Until
11 Oct
23h 59m
ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹದಿಮೂರನೇ ದಿನ
ನಿನ್ನೆ ಸಿಂಧನೂರಿನಿಂದ ಆರಂಭವಾದ #ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿ ಸಿರುಗುಪ್ಪವನ್ನು ದಾಟಿ ಬಳ್ಳಾರಿಗೆ ಬಂತು. ಬಳ್ಳಾರಿಯಲ್ಲಿ ಕುಂಬಾರ, ನೇಕಾರ ಮತ್ತು ವಿಶ್ವಕರ್ಮ ಸಮುದಾಯದೊಂದಿಗೆ ನರೇಂದ್ರಮೋದಿ ಅವರ ಅಗತ್ಯತೆಯ ಕುರಿತಂತೆ ಸಂವಾದ ನಡೆಸಲಾಯ್ತು. ಆನಂತರ ಬಳ್ಳಾರಿಯ ಬೈಕ್ ರ್ಯಾಲಿಯಲ್ಲಿ ನೂರಾರು ಜನ ಸೇರಿ ಯಾತ್ರೆಯನ್ನು ಸುಂದರಗೊಳಿಸಿದರು. ಅಲ್ಲಿಂದ ಮುಂದೆ ತೋರಣಗಲ್ಲಿಗೆ ಬಂದು ವಿಶೇಷವಾದ ತರುಣರಿಂದಲೇ ಕೂಡಿದ ಬೈಕ್ ರ್ಯಾಲಿಯನ್ನು ಕುರೇಕುಪ್ಪದವರೆಗೂ ಒಯ್ಯಲಾಯ್ತು. ಆ ಹಳ್ಳಿಯಲ್ಲಿ ಮೋದಿಯವರ ಕುರಿತಂತೆ ಕೇಳಲು ಜನ ಉತ್ಸಾಹದಿಂದ ನೆರೆದಿದ್ದರು. ಮುಂದೆ ಕಮಲಾಪುರ-ಹಂಪಿಗಳಲ್ಲಿ ನೂರಾರು ಮಂದಿಯ ಬೈಕ್ ರ್ಯಾಲಿ ಹೊಸಪೇಟೆಯವರೆಗೂ ಜೊತೆಗೂಡಿತು. ಹೊಸಪೇಟೆಯಲ್ಲಂತೂ ಪ್ರತಿ ವೃತ್ತದಲ್ಲೂ ಜನ ಪ್ರೀತ್ಯಾದರಗಳಿಂದ ಸ್ವಾಗತಿಸಿದರು. ಭಾರತಮಾತೆಯ ಮತ್ತು ಮೋದಿಯ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ದಾರಿಯುದ್ದಕ್ಕೂ ಅನೇಕ ಪ್ರತಿಮಗಳಿಗೆ ಮಾಲಾರ್ಪಣೆ ಮಾಡುತ್ತಾ ಕೊನೆಯಲ್ಲಿ ಬೃಹತ್ತಾಗಿರುವ ಆಂಜನೇಯನ ಪ್ರತಿಮೆಯಡಿ ನಿಂತು ಜನರನ್ನುದ್ದೇಶಿಸಿ ಮಾತನಾಡಲಾಯ್ತು. ಅಲ್ಲಿಂದ ಮುಂದೆ ಕೊಪ್ಪಳದೆಡೆಗೆ ಯಾತ್ರೆ. ಅಲ್ಲಿಯೂ ದೊಡ್ಡಮಟ್ಟದ ತರುಣರ ಪಡೆ ಕಾಯುತ್ತಾ ಇತ್ತು. ಅಲ್ಲಿ ಮೆರವಣಿಗೆ ಮುಗಿಸಿ, ಕಿಕ್ಕಿರಿದು ಸೇರಿದ್ದ ಜನರ ನಡುವೆ ಬೃಹತ್ತಾದ ವೇದಿಕೆ ಕಾರ್ಯಕ್ರಮ ನಡೆಸಲಾಯ್ತು. ಸುಮಾರು ಒಂದೂವರೆ ತಾಸುಗಳ ಕಾಲ ಮೋದಿಯವರ ಸಾಧನೆಗಳಿಗೆ ಕಿವಿಯಾದ ಕೊಪ್ಪಳದ ಜನ ಜಯಘೋಷಗಳೊಂದಿಗೆ ಸಂಭ್ರಮಿಸಿದರು.
ಏನೇ ಹೇಳಿ ಈ ಯಾತ್ರೆ ಮೋದಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿರುವುದಂತೂ ಸತ್ಯ.
Scan QR Code

Age Group
All