ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹನ್ನೊಂದನೇ ದಿನ
ನಿನ್ನೆ ಬೆಳಿಗ್ಗೆ ಬೀದರ್‌ನ ಗುರುದ್ವಾರದಿಂದ ಲಂಗರ್‌ನ ಪ್ರಸಾದ ಸ್ವೀಕರಿಸಿ ಹೊರಟ ಯಾತ್ರೆ ಕಮಠಾಣ, ಮನ್ನಾಎಖೇಳ್ಳಿ, ಮಿನಖೇರಾ, ಚಾಂಗ್‌ಲೇರಾ, ತುಮಕುಂಟಾಗಳಲ್ಲಿ ಸ್ವಾಗತ ಸ್ವೀಕರಿಸಿ ಚಿಂಚೋಳಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಶೌರ್ಯ ಯಾತ್ರೆಯೊಂದಿಗೆ ಬೆಸೆದಿತ್ತು. ಅಲ್ಲಿ ಹಿಂದುತ್ವದ ಜಾಗೃತಿಗಾಗಿ ಈಗ ಭಾರತದಲ್ಲಿ ನಡೆಯುತ್ತಿರುವ ಕಾರ್ಯಗಳ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಯ್ತು. ಅಲ್ಲಿಂದ ಮುಂದೆ ಸುಲೇಪೇಟ್, ತೆಕ್ಕಲಕೋಟೆ ಮತ್ತು ಬಿಬ್ಬಳ್ಳಿ ಕ್ರಾಸ್‌ಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸೇಡಂನಲ್ಲಿ ಬೈಕ್ ರ್ಯಾಲಿಯ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯ್ತು. ಅಲ್ಲಿಂದ ಮುಂದೆ ಗಂಗಾನಗರ, ಭೀಮಳ್ಳಿ ಕ್ರಾಸ್‌ಗಳಲ್ಲಿ ತಾಂಡಾದ ತಾಯಂದಿರಿಂದ ಪ್ರೀತ್ಯಾದರಗಳನ್ನು ಸ್ವೀಕರಿಸಿ ಯಾದಗಿರಿಗೆ ಬಂತು. ಯಾದಗಿರಿಯಲ್ಲಿ ನೂರಾರು ಬೈಕ್‌ಗಳ ಭರ್ಜರಿ ಮೆರವಣಿಗೆ ಮತ್ತು ವಿಶೇಷ ಕಾರ್ಯಕ್ರಮ. ಇಲ್ಲಿ ನರೇಂದ್ರಮೋದಿ ಅವರ ಸಾಧನೆಗಳ ಕುರಿತಂತೆ ಜನರೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಒಂದಂತೂ ಸತ್ಯ, ಮೋದಿ ಮಾಡಿದ ಕೆಲಸಗಳು ನಾಡಿನ ಮೂಲೆ ಮೂಲೆಗೂ ತಲುಪಿವೆ. ಅದನ್ನು ನೆನಪು ಮಾಡಿಸುವುದಷ್ಟೆ ನಮ್ಮ ಕೆಲಸ. ಬರೆದಿಟ್ಟುಕೊಳ್ಳಿ ಕಾಂಗ್ರೆಸ್ಸಿಗೆ ನಿಜಕ್ಕೂ ಈ ಬಾರಿಯ ಫಲಿತಾಂಶ ಆಘಾತ ತರಲಿದೆ
