ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!
favorite_border
calendar_month
21 Jul
Until 23 Jul 2d

ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!

ಕುಂದಾಪುರದಲ್ಲಿ ನಮೋಬ್ರಿಗೇಡ್‌ ವತಿಯಿಂದ ಜುಲೈ 21 ರಿಂದ 23ರವರೆಗೆ ಚಕ್ರವರ್ತಿ ಸೂಲಿಬೆಲೆಯವರ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂರು ದಿನಗಳ ಈ ಉಪನ್ಯಾಸದಲ್ಲಿ ಭಾರತದ ಒಳ-ಹೊರಗಿನ ಶತ್ರುಗಳು, ಮಾರ್ಕ್ಸ್‌ವಾದದ ಅಡ್ಡಪರಿಣಾಮಗಳು, ಭಾರತ ಈ ಕಾರಣಕ್ಕೆ ಎದುರಿಸುತ್ತಿರುವ ಸವಾಲುಗಳು ಮತ್ತು ಕಳೆದ ಒಂಭತ್ತು ವರ್ಷಗಳಲ್ಲಿ ಮೋದಿಯವರು ಅದನ್ನು ಎದುರಿಸಿ ನಿಂತು ಭಾರತವನ್ನು ಕಟ್ಟಿರುವ ಪರಿಯನ್ನು ಎಳೆ-ಎಳೆಯಾಗಿ ಜನರ ಮುಂದೆ ಬಿಚ್ಚಿಡಲಾಯ್ತು. ಜನರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಮೊದಲ ದಿನ 800ಕ್ಕೂ ಹೆಚ್ಚು ಜನ ಆಗಮಿಸಿದ್ದರೆ, ಮೂರನೆಯ ದಿನದ ವೇಳೆಗೆ 1200ಕ್ಕೂ ಹೆಚ್ಚು ಜನ ಸೇರಿದ್ದರು. ಸಭಾಂಗಣ ಕಿಕ್ಕಿರಿದು ತುಂಬಿತ್ತು.

ಕಾರ್ಯಕ್ರಮ ನಡೆಸುವ ಮುನ್ನವೇ ಕುಂದಾಪುರದ NSUIನ ಘಟಕದವರು ಇದನ್ನು ವಿರೋಧಿಸಿ, ಚಕ್ರವರ್ತಿ ಸೂಲಿಬೆಲೆಯವರ ಕಾರ್ಯಕ್ರಮ ನಡೆಯಲು ಅನುಮತಿ ಕೊಡಬಾರದೆಂದು ಡಿಸಿ ಬಳಿ ಮನವಿ ಕೊಟ್ಟಿದ್ದರು. ಆದರೆ, ಕುಂದಾಪುರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ, ಹಿಂದೆಂದಿಗಿಂತಲೂ ಬಲವಾಗಿ ಈ ಬಾರಿ ಮೋದಿಯೊಡನೆ ನಿಲ್ಲುತ್ತೇವೆಂದು ತೋರಿಸಿಕೊಟ್ಟರು.

Scan QR Code

Comments are closed.