ನಮೋಬ್ರಿಗೇಡ್ ವೆಬ್‌ಸೈಟ್ ಲೋಕಾರ್ಪಣೆ
ನಿನ್ನೆ #ನಮೋಬ್ರಿಗೇಡ್ ವೆಬ್‌ಸೈಟ್ ಲೋಕಾರ್ಪಣೆಗೆ ಕಿಕ್ಕಿರಿದು ಸೇರಿದ್ದ ಜನಸಮೂಹ ಕಂಡು ಹೃದಯಕ್ಕೆ ಹಾಯೆನಿಸಿತು
ಮೋದಿ ಸದ್ದಿಲ್ಲದೇ ಪ್ರತಿಯೊಬ್ಬರ ಹೃದಯದಲ್ಲೂ ಮನೆ ಮಾಡಿಕೊಂಡು ಕುಳಿತುಬಿಟ್ಟಿದ್ದಾರೆ
ಅವರ ಈ ಪ್ರಭಾವ ನಿನ್ನೆಯ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.. !!
ವೆಬ್‌ಸೈಟ್ ಲೋಕಾರ್ಪಣೆಗೆ ಅತಿಥಿಗಳನ್ನು ಆಯ್ಕೆ ಮಾಡಿದ ಪರಿಯೂ ವಿನೂತನವಾಗಿತ್ತು. ಮೋದಿಯ ಕುರಿತು ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಸುದೀರ್ಘವಾಗಿ ಚರ್ಚಿಸುತ್ತಾ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರನ್ನು ಲೋಕಾರ್ಪಣೆಗೆ ಆಹ್ವಾನಿಸಲಾಗಿತ್ತು
ಮೋದಿಯ ಬಗ್ಗೆ ತಿಳಿದುಕೊಳ್ಳುತ್ತಲೇ ಭಾರತವನ್ನೇ ಅರಿತಂತಹ ಅನುಭವ ಅನೇಕರಿಗೆ. ಮೋದಿಯವರ ಮೇಲಿನ ಅಭಿಮಾನ ಮತ್ತು ದೇಶಭಕ್ತಿಯ ಕಿಚ್ಚು ಎಂಥದ್ದೆಂದರೆ ಬಂದವರನೇಕರು ಕುರ್ಚಿ ಸಿಗದೇ ನೆಲದ ಮೇಲೆ, ವೇದಿಕೆಯ ಮೇಲೆಲ್ಲ ಕುಳಿತು ಸುಮಾರು ಎರಡು ಗಂಟೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೆಬ್‌ಸೈಟ್ ಲೋಕಾರ್ಪಣೆಗೆ ಸಿಕ್ಕ ಈ ಪ್ರತಿಕ್ರಿಯೆ ನಮ್ಮ ಉತ್ಸಾಹವನ್ನು ನೂರ್ಮಡಿಯಾಗಿಸಿದೆ. ಕಳೆದ ಬಾರಿ ಮೋದಿಗೆ ಎರಡು ಸೀಟು ಕಡಿಮೆಯಾಗಿತ್ತು. ಈ ಬಾರಿ ಅದನ್ನೂ ಸೇರಿಸಿ ಕೊಡೋಣ.
ಹಾಗೆಂದೇ ನಮೋಬ್ರಿಗೇಡ್‌ನ ಮೊಬೈಲ್‌ನ ಕೊನೆಯ ಆರು ಸಂಖ್ಯೆ 28-2024 ಎಂದಿದೆ. ಕೊನೆಯ ಏಳು ಸಂಖ್ಯೆ 328-2024 ಎಂದಿದೆ. ನಮಗೆ 28, ದೇಶಕ್ಕೆ 328 ಎನ್ನುವ ಸಂಕಲ್ಪವದು
ಸಾಧ್ಯವಾದಾಗೊಮ್ಮೆ ವೆಬ್‌ಸೈಟ್‌ಗೆ ಭೇಟಿಕೊಡಿ. www.namobrigade.in
ಮತ್ತು 9513282024 ಎಂಬ ಸಂಖ್ಯೆಯನ್ನು “ನಮೋಬ್ರಿಗೇಡ್ ಕರ್ನಾಟಕ” ಎಂದು ಸೇವ್ ಮಾಡಿಕೊಂಡು ನಮಗೊಂದು ವಾಟ್ಸಪ್ ಸಂದೇಶ ಕಳಿಸಿಕೊಡಿ. ಭಾರತವನ್ನು ಉಳಿಸುವ ಈ ಹೋರಾಟದಲ್ಲಿ ಬಲವಾಗಿ ನಿಲ್ಲೋಣ.
#NamoBrigade 2.0

Comments are closed.