Activities
08 Oct
Until
08 Oct
23h 59m
ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಒಂಭತ್ತನೇ ದಿನ
ನಮ್ಮ ಯಾತ್ರೆ ಮೊನ್ನೆ ಬಬಲೇಶ್ವರದಿಂದ ಹೊರಟು, ಬಿಜಾಪುರದ ಬೈಕ್ ರ್ಯಾಲಿ ಮುಗಿಸಿಕೊಂಡು ಸಿಂದಗಿಯತ್ತ ತೆರಳಿತು. ದಾರಿಯುದ್ದಕ್ಕೂ ಮಹಲ್, ದೇವರ ಹಿಪ್ಪರಗಿ, ರಾಂಪುರ, ಕಲಹಳ್ಳಿ, ಕೊರಹಳ್ಳಿ, ದೇವಣಗಾಂವ್, ಆತನೂರು, ಚೌಡಾಪುರಗಳಲ್ಲೆಲ್ಲ ಸ್ವಾಗತವನ್ನು ಸ್ವೀಕರಿಸಿ ಸಂಭ್ರಮಿಸಿತು. ಸಿಂದಗಿಯಲ್ಲಂತೂ ತರುಣರ ಗಡಣವೇ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿತಲ್ಲದೇ ಸಂಗಮೇಶ್ವರ ದೇವಸ್ಥಾನದಲ್ಲಿ ಸಭೆಯಲ್ಲಿ ಪಾಲ್ಗೊಂಡಿತು. ಅಲ್ಲಿಂದ ಅಫ್ಜಲ್‌ಪುರದಲ್ಲಿ ಮತ್ತಷ್ಟು ತರುಣರ ಸೇರ್ಪಡೆ. ಊರಿನುದ್ದಕ್ಕೂ ಮೋದಿಗೆ ಜಯಘೋಷವನ್ನು ಕೂಗುತ್ತಾ ಯುವಪಡೆ ಸಾಗುತ್ತಿದ್ದರೆ ಜನ ಅಚ್ಚರಿಯಿಂದ ನೋಡುತ್ತಿದ್ದರು. ಈ ಯಾತ್ರೆ ಕಲ್ಬುರ್ಗಿಗೆ ಬರುವ ವೇಳೆಗೆ ಬೈಕ್ ಸವಾರರ ಸಂಖ್ಯೆ ಕಿಕ್ಕಿರಿದು ಸೇರಿತ್ತು. ಮೋದಿಯ ಅಭಿಮಾನಿಗಳಿಗೆ ಅಗತ್ಯವಿದ್ದ ಕಿಡಿಯ ಸ್ಪರ್ಶ ಆಗಿತ್ತು. ವಿಶ್ವಹಿಂದೂ ಪರಿಷತ್‌ನ ಗಣಪತಿಯ ಪೆಂಡಾಲ್‌ನಲ್ಲಿ ವಿಶ್ವಗುರು ಭಾರತದ ಪರಿಪ್ರೇಕ್ಷದಲ್ಲಿ ಮೋದಿಯವರ ಸಾಧನೆಯ ಕುರಿತಂತೆ ನುಡಿಗಳನ್ನು ಕೇಳಲು ಸುಮಾರು ಏಳು ಸಾವಿರದಷ್ಟು ಜನ ಸೇರಿಕೊಂಡಿದ್ದರು. ಅಲ್ಲೊಂದು ಅದ್ಭುತ ಲೋಕವೇ ನಿರ್ಮಾಣಗೊಂಡಿತ್ತು.ನಾವೆಣಿಸಿದ್ದಕ್ಕಿಂತಲೂ #ಜನ_ಗಣ_ಮನ_ಬೆಸೆಯೋಣ ರ್ಯಾಲಿ ಭರ್ಜರಿಯಾಗಿಯೇ ನಡೆಯುತ್ತಿದೆ
Scan QR Code

Age Group
All
Comments are closed.