ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಏಳನೇ ದಿನ
ಪ್ರತಿದಿನ ವಿಶಿಷ್ಟವಾದ ರ್ಯಾಲಿ ಎಂದೇ ಹೇಳುವಂತಾಗಿದೆ. ನಿನ್ನೆಯಂತೂ ಬಲುವಿಶಿಷ್ಟ. ರಾಯಣ್ಣನ ಜನ್ಮಸ್ಥಳ ಮತ್ತು ಸಮಾಧಿಯ ಭೇಟಿ, ಚೆನ್ನಮ್ಮಳ ಕೋಟೆ ಮತ್ತು ಸಮಾಧಿಯ ಭೇಟಿ, ಮಲ್ಲಮ್ಮನ ಬೆಳವಾಡಿಯನ್ನೂ ದರ್ಶಿಸುವ ಅವಕಾಶ ಸಿಕ್ಕಿದ್ದು ವಿಶಿಷ್ಟವಲ್ಲದೇ ಮತ್ತೇನು? ದಾರಿಯುದ್ದಕ್ಕೂ ನಂದಗಡ, ಬೀಡಿದಲ್ಲಿ, ಬೈಲೂರು, ಕಿತ್ತೂರು, ಅರಭಾವಿ, ಹಿರೇನಂದಿಹಳ್ಳಿ ಕ್ರಾಸ್, ಸಂಗೊಳ್ಳಿ, ಬೆಳವಾಡಿ, ಬೈಲಹೊಂಗಲ, ಕಸಬಾ ಮುರುಗೋಡು, ಬೂದಿಗೊಪ್ಪ, ಯರಗಟ್ಟಿ, ಚಂದರಗಿಗಳಲ್ಲೆಲ್ಲ ಜನ ಪ್ರೀತಿಯಿಂದ ಸ್ವಾಗತಿಸಿದರು. ಕೆಲವೆಡೆ ಅವರೊಂದಿಗೆ ಚರ್ಚಿಸುವ ಅವಕಾಶ ದೊರೆಯಿತು. ಸಂಜೆ ಬೆಳಗಾವಿಯ ರಾಮದುರ್ಗದಲ್ಲಿ ಅಭೂತಪೂರ್ವ ಕಾರ್ಯಕ್ರಮ. ನೂರಾರು ಬೈಕುಗಳ ರ್ಯಾಲಿ, ರಸ್ತೆಯ ಇಕ್ಕೆಲಗಳಲ್ಲೂ ರ್ಯಾಲಿಯ ಸ್ವಾಗತಕ್ಕೆ ನಿಂತಿದ್ದ ಅಪಾರ ಜನಸ್ತೋಮ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಜನ ಮೋದಿಯ ಅಲೆ ಎಷ್ಟು ಬಲವಾಗಿದೆ ಎನ್ನುವುದನ್ನು ಸೂಚಿಸುವಂತಿತ್ತು. ರಾತ್ರಿ ಇಲ್ಲಿನ ಪ್ರಮುಖ ನೇಕಾರ ಸಮಾಜದೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತಲ್ಲದೇ ಅನೇಕ ವಿಚಾರಗಳನ್ನು ಚರ್ಚಿಸಲಾಯ್ತು. ಒಟ್ಟಾರೆ ಈ ಯಾತ್ರೆ ಅನುಭವಗಳ ರಸದೂಟವನ್ನು ನಮಗೆ ಉಣಬಡಿಸಿತು

Comments are closed.