ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಆರನೇ ದಿನ
ಆರನೇ ದಿನದ #ಜನ_ಗಣ_ಮನ_ಬೆಸೆಯೋಣ ಯಾತ್ರೆ ನಿನ್ನೆಗೆ ಮುಗಿಯಿತು. ಹೆಚ್ಚು ಕಡಿಮೆ ಪೂರ್ಣ ಉತ್ತರ ಕನ್ನಡ ಜಿಲ್ಲೆಯನ್ನು ಈ ದಿನ ಮುಟ್ಟಿದ ಆನಂದವಿದೆ. ಅಂಕೋಲಾದಲ್ಲಿ ಭರ್ಜರಿ ಬೈಕ್ ರ್ಯಾಲಿ. ದಾರಿಯಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿದ ಪರಿವಾರದ ಪಾರಂಪರಿಕ ವೈದ್ಯರನ್ನು ಭೇಟಿ ಮಾಡಿದೆವು. ಅವರ ಆಸ್ಪತ್ರೆಗೆ ಭೇಟಿಕೊಟ್ಟು ಅಲ್ಲಿ ಪಾರ್ಶ್ವವಾಯು, ಮೆದುಳು ರಕ್ತಸ್ರಾವ, ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳನ್ನು ಭೇಟಿಯಾದೆವು. ಅಲ್ಲಿಯೇ ಪುಟ್ಟ ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಲಾಯ್ತು. ಅಲ್ಲಿಂದ ಮುಂದೆ ಪದ್ಮಶ್ರೀ ಸುಕ್ರಿ ಬೊಮ್ಮಗೌಡರನ್ನು ಭೇಟಿಮಾಡಿ ನಮ್ಮ ಈ ಯಾತ್ರೆಗೆ ಆಶೀರ್ವಾದ ಪಡೆದೆವು ಮತ್ತು ಮೋದಿ ಪ್ರಧಾನಿಯಾಗುವ ಕುರಿತಂತೆ ಆಕೆಯ ಅಭಿಪ್ರಾಯದಿಂದ ಪ್ರೇರಣೆಯನ್ನೂ ಕೂಡ. ಅಲ್ಲಿಂದ ಮುಂದೆ ಕಾರವಾರ ಮಾರ್ಗವಾಗಿ ರಾತ್ರಿ ಜೋಯಿಡಾದಲ್ಲಿ ಜನರೊಂದಿಗೆ ಮೂರನೇ ಬಾರಿ ಮೋದಿಯ ಆಯ್ಕೆಯ ಕುರಿತಂತೆ ಚರ್ಚೆ ನಡೆಸಿದೆವು. ಇಂದಿನಿಂದ ನಮ್ಮ ಯಾತ್ರೆ ಉತ್ತರ ಕರ್ನಾಟಕದ ಕಡೆಗೆ

Comments are closed.