ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಐದನೇ ದಿನ
ನಿನ್ನೆ ಕಲ್ಲಡ್ಕದಿಂದ ಆರಂಭವಾದ #ಜನ_ಗಣ_ಮನ_ಬೆಸೆಯೋಣ ಯಾತ್ರೆ ಮಂಗಳೂರು ಮಾರ್ಗವಾಗಿ ಉಡುಪಿಗೆ ಬಂತು. ಮಲ್ಪೆಯಾದ್ಯಂತ ಬೈಕ್ ರ್ಯಾಲಿಯೊಂದಿಗೆ, ಬಾಲಕರ ಭಜನಾ ಮಂದಿರದಲ್ಲಿ ಮೀನುಗಾರರೊಂದಿಗೆ ಕೂಡಿಕೊಂಡು ಯಾತ್ರೆಯ ವೈಶಿಷ್ಟ್ಯವನ್ನು, ಮೋದಿಯವರ ವಿಚಾರಗಳನ್ನು ಹಂಚಿಕೊಳ್ಳಲಾಯ್ತು. ಅಲ್ಲಿಂದ ಕುಂದಾಪುರದವರೆಗೆ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಜನರ ಪ್ರೀತಿಯ ಸ್ವಾಗತವನ್ನು ಸ್ವೀಕರಿಸುತ್ತಾ ಕುಂದಾಪುರ ನಗರ ಪ್ರದಕ್ಷಿಣೆ ಮಾಡಿ, ಶಾಸ್ತ್ರಿಜೀಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯ್ತು. ಮತ್ತೆ ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಜನರ ಪ್ರೀತಿಯ ಸ್ವಾಗತವನ್ನು ಸ್ವೀಕರಿಸಿ ಭಟ್ಕಳ ಮಾರ್ಗವಾಗಿ ಹೊನ್ನಾವರಕ್ಕೆ ಬಂದು ನಗರ ಪ್ರದಕ್ಷಿಣೆ ಮಾಡಿ, ಸಂಜೆ ಕಡತೋಕಾದಲ್ಲಿ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾದೆವು. ಈ ವಿಶಿಷ್ಟವಾದ ಗ್ರಾಮದಲ್ಲಿ ನೂರಾರು ಮಂದಿ ಮೋದಿಯವರ ವಿಚಾರಧಾರೆಗಳನ್ನಾಲಿಸಲು ನಿಂತಿದ್ದರು. ಅವರ ಪ್ರೀತಿ- ಆದರಗಳಿಗೆ ಕಾರ್ಯಕರ್ತರೆಲ್ಲ ಮನಸೋತರು. ಹಳದಿಪುರದಲ್ಲಿ ರಾತ್ರಿ ಉಳಿದುಕೊಂಡ ರ್ಯಾಲಿಯ ತಂಡ ಇಂದಿನ ಯಾತ್ರೆಗೆ ಸಜ್ಜಾಗಿದೆ. ಹತ್ತಿರದಲ್ಲಿದ್ದರೆ ಬನ್ನಿ ಭಾಗವಹಿಸಿ

Comments are closed.