ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ನಾಲ್ಕನೇ ದಿನ
ನಿನ್ನೆ ಹಾಸನದಿಂದ ಹೊರಟು ಬೇಲೂರು ಮಾರ್ಗವಾಗಿ ದಕ್ಷಿಣ ಕನ್ನಡದ ಬೈಕ್ ಯಾತ್ರೆ ಆರಂಭವಾಯ್ತು. ಸಕಲೇಶಪುರ, ಸುಬ್ರಹ್ಮಣ್ಯ, ಕಡಬ, ಸುಳ್ಯ, ಪುತ್ತೂರು ಇಲ್ಲೆಲ್ಲ ಜನರನ್ನು ಭೇಟಿ ಮಾಡುತ್ತಾ, ಕಲ್ಲಡ್ಕಕ್ಕೆ ಬಂದು ಸೇರಿದೆವು. ದಾರಿಯುದ್ದಕ್ಕೂ ಜನರ ಉತ್ಸಾಹ ಮನ ಮಚ್ಚುವಂತಿತ್ತು ಮತ್ತು ಸಹಜವಾಗಿಯೇ ಈ ಭಾಗ ಹಿಂದುತ್ವದ ಅಲೆಯಿಂದ ಪ್ರೇರಿತವಾಗಿರುವುದರಿಂದ ಮೋದಿಯವರ ಚಿಂತನೆಗಳು ಇಲ್ಲಿ ಸಾಕಷ್ಟು ಕೆಲಸ ಮಾಡಿವೆ. ಇಂದು ಮಂಗಳೂರು, ಉಡುಪಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಬೆಸೆಯಲಿದ್ದೇವೆ

Comments are closed.