Activities
favorite_border
calendar_month
30 Sep
Until 30 Sep 23h 59m

ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಮೂರನೇ ದಿನ

 

ಜನ_ಗಣ_ಮನ_ಬೆಸೆಯೋಣ ರ್ಯಾಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಚಾಮರಾಜನಗರದಿಂದ ಆರಂಭವಾದ ರ್ಯಾಲಿ ನಂಜನಗೂಡಿನಲ್ಲಿ ಉಪಾಹಾರ ಮುಗಿಸಿ, ಶ್ರೀಕಂಠೇಶ್ವರನಿಗೆ ನಮನ ಸಲ್ಲಿಸಿ ಮೈಸೂರಿಗೆ ಬಂತು. ಅಲ್ಲಿ ನಮೋಬ್ರಿಗೇಡ್‌ ಕಾರ್ಯಾಲಯದ ಉದ್ಘಾಟನೆ ಮುಗಿಸಿ ಹೊರಟ ನಾವು ಕೆ.ಆರ್. ನಗರದಲ್ಲಿ ಅದ್ದೂರಿ ಸ್ವಾಗತಕ್ಕೆ ಸಾಕ್ಷಿಯಾದೆವು. ವಿಸ್ತಾರವಾದ ಸಂವಾದ ನಡೆಯಿತು, ಜೊತೆಗೆ ಭರ್ಜರಿ ಊಟ. ಅಲ್ಲಿಂದ ಮುಂದೆ ಹೊಳೆನರಸೀಪುರದ ಕಾರ್ಯಕರ್ತರೊಂದಿಗೆ ಮಾತನಾಡಿ ರ್ಯಾಲಿಯಲ್ಲಿಯೇ ಹೊರಟು ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಾಸನಕ್ಕೆ ಬಂದೆವು. ಹಾಸನದ ಪ್ರಮುಖ ಬೀದಿಗಳನ್ನೆಲ್ಲ ಸುತ್ತಾಡಿ ಹೆಗರೆಯ ಮೂಲಕ ಮಲ್ಲಾಪುರ ಎಂಬ ಹಳ್ಳಿಯಲ್ಲಿ ಸೇರಿಕೊಂಡೆವು. ಇಲ್ಲಿ ಹಳ್ಳಿಯ ತರುಣರೊಂದಿಗೆ ಮೋದಿಯವರ ಕುರಿತಂತೆ ಸಂವಾದವಿತ್ತು. ಪಟ್ಟಣಗಳ ಮಂದಿ ಹಳ್ಳಿಗರಿಗೆ ಮೋದಿಯ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ಆದರೆ ಸಂವಾದದಲ್ಲಿ ಈ ತರುಣರು ಹೇಳಿದ ಸಂಗತಿಗಳು ಅಚ್ಚರಿ ಹುಟ್ಟಿಸುವಂತಿದ್ದವು. ರಾಷ್ಟ್ರೀಯ ಸುರಕ್ಷತೆಯಿಂದ ಹಿಡಿದು ಅಪಘಾತ ವಿಮೆಯವರೆಗೂ ಮೋದಿಯ ಕೆಲಸಗಳು ಅವರಿಗೆ ಸಾಕಷ್ಟು ಗೊತ್ತಿವೆ. ಇವರೆಲ್ಲರೂ ಮೋದಿಗಾಗಿ ಮತ ಹಾಕಿಸುವಲ್ಲಿ ಕೆಲಸ ಮಾಡುವ ಭರವಸೆ ಕೊಟ್ಟಿದ್ದಾರೆ. ಭರವಸೆ ದಿನೇ ದಿನೇ ಹೆಚ್ಚಾಗುತ್ತಿದೆ

Scan QR Code
Age Group
All

Comments are closed.