ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹದಿನಾರನೇ ದಿನ
ಚಿತ್ರದುರ್ಗದಿಂದ ಹೊರಟ ಯಾತ್ರೆ ನಿನ್ನೆ ಚಳ್ಳಕೆರೆ, ಹಿರಿಯೂರು, ಶಿರಾ ಮಾರ್ಗಗಳನ್ನು ಕ್ರಮಿಸಿ ತುಮಕೂರಿಗೆ ಬಂತು. ತುಮಕೂರಿನಲ್ಲಿ ಬೈಕ್ ರ್ಯಾಲಿಯ ಮೂಲಕ ಶ್ರೀರಾಮಮಂದಿರದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಲಾಯ್ತು. ಮುಂದೆ ದಾಬಸ್‌ಪೇಟೆಯ ಮೂಲಕ ನೆಲಮಂಗಲಕ್ಕೆ ಬಂದು ಕಾರ್ಯಕರ್ತರೊಂದಿಗೆ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿ, ದಾಸರಹಳ್ಳಿ, ರಾಜಾಜಿನಗರಗಳಲ್ಲಿ ಸ್ವಾಗತ ಸ್ವೀಕರಿಸಿ ಮೆಜೆಸ್ಟಿಕ್‌ನ ಬಳಿಯ ನಾಗರಕಟ್ಟೆಯ ಹಿಂಭಾಗದ ಕ್ರೀಡಾಂಗಣದಲ್ಲಿ ಉದ್ದೇಶಿತ ಬೈಕ್ ರ್ಯಾಲಿಗೆ ಮಂಗಳ ಹಾಡಲಾಯ್ತು

Comments are closed.