ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹದಿನಾಲ್ಕನೇ ದಿನ
ಕೊಪ್ಪಳದಿಂದ ಶುರುವಾದ #ಜನ_ಗಣ_ಮನ_ಬೆಸೆಯೋಣ ಯಾತ್ರೆ ಲಕ್ಕುಂಡಿಯಲ್ಲಿ ಸ್ವಾಗತವನ್ನು ಸ್ವೀಕರಿಸಿ ಬೆಟಗೇರಿ, ಗದಗಗಳನ್ನು ರ್ಯಾಲಿಯ ಮೂಲಕ ಸಂದರ್ಶಿಸಿ ಅಣ್ಣಿಗೇರಿಯಲ್ಲಿ ದೊಡ್ಡ ಸಂಖ್ಯೆಯ ತರುಣರನ್ನು ಕೂಡಿಸಿಕೊಂಡಿ ಹುಬ್ಬಳ್ಳಿಯತ್ತ ತೆರಳಿತು. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕರ್ತೃ ಗದ್ದುಗೆಗೆ ನಮನ ಸಲ್ಲಿಸಿ ಆರೆಂಟು ಕಿಲೊಮೀಟರ್‌ಗಳ ರ್ಯಾಲಿಯನ್ನು ಕ್ರಮಿಸಿ, ಸಿದ್ಧಾರೂಢರ ಮಠದಲ್ಲಿ ಸಂಪನ್ನವಾಯ್ತು. ಸಂಜೆ ಶಿಗ್ಗಾಂವಿಯಲ್ಲಿ ಬೈಕ್ ರ್ಯಾಲಿ, ಅಲ್ಲಿಂದ ಹಾವೇರಿಯತ್ತ ಪಯಣ. ಹಾವೇರಿಯಲ್ಲಿ ತರುಣರ ದೊಡ್ಡದ್ದೊಂದು ಸಮೂಹವನ್ನು ಸೇರಿಸಿಕೊಂಡು ದೇವಗಿರಿಗೆ ಪಯಣ ಬೆಳೆಸಿದರು. ಈ ಹಳ್ಳಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನರೇಂದ್ರಮೋದಿ ಅವರ ಸಾಧನೆಗಳನ್ನು ಹಂಚಿಕೊಳ್ಳಲಾಯ್ತು. ಹಳ್ಳಿಯಲ್ಲೂ ಸಹ ಜನರ ಉತ್ಸಾಹ ನಮ್ಮನ್ನೇ ಬೆಚ್ಚಿಬೀಳಿಸುವಂತಿತ್ತು. ಇಂದು ಪಯಣ ಚಿತ್ರದುರ್ಗದತ್ತ..

Comments are closed.