ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಎರಡನೇ ದಿನ
ನಮೋಬ್ರಿಗೇಡ್‌ನ #ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಎರಡನೇ ದಿನ ಅತಿ ವಿಶಿಷ್ಟವಾದ್ದು. ಜಿಗಣಿಯಲ್ಲಿ ಹಳ್ಳಿಕಾರ್ ಗೋಪೂಜೆಯೊಂದಿಗೆ ಆರಂಭವಾಯ್ತು. ರಾಮನಗರದಲ್ಲಿ ಇರುಳಿಗರ ದೊಡ್ಡಿಯಲ್ಲಿ ಕಾಡಿನ ಜನರೊಂದಿಗೆ ಸ್ವಲ್ಪ ಸಮಯ ಕಳೆಯುವಂತಾಯ್ತು. ಆನಂತರ ಚೆನ್ನಪಟ್ಟಣ, ಮಂಡ್ಯ, ಕೆ.ಎಂ ದೊಡ್ಡಿಗಳಲ್ಲಿ ಕಾವೇರಿ ಕುರಿತು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಕ್ಕೆ ನಿಲ್ಲಲಾಯಿತು. ಮಳವಳ್ಳಿ, ಕೊಳ್ಳೆಗಾಲ, ಯಳಂದೂರುಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಪ್ರತಿಮೆಗೆ ಹಾರ ಹಾಕಲಾಯ್ತು. ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಕಾರ್ಯಕರ್ತರ ಭೇಟಿ, ಮಾತುಕತೆ ಮತ್ತು ಕೊನೆಗೆ ಚಾಮರಾಜನಗರದಲ್ಲಿ ತರುಣರೊಂದಿಗೆ ಸಂವಾದ. ಬೆಳಿಗ್ಗೆ 6ರಿಂದ ಸಂಜೆ 8ರವರೆಗೆ ಪುರಸೊತ್ತಿಲ್ಲದ ಚಟುವಟಿಕೆ. ರಾತ್ರಿ ಮರುದಿನದ ಕಾರ್ಯಕ್ರಮದ ಚರ್ಚೆ ಮುಗಿಸಿ ಮಲಗುವುದ್ಯಾವಾಗ ಎಂದು ಕಂಗಳು ಕಾತರಿಸುವಂತಿತ್ತು. ಬೈಕ್ ಯಾತ್ರೆಯ ಎರಡನೇ ದಿನ ಎಷ್ಟು ಸುಂದರವಾಗಿತ್ತು! ವರ್ಣಿಸುವುದು ಬಹಳ ಕಷ್ಟ

Comments are closed.