ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಮೊದಲನೇ ದಿನ
ಕೋಲಾರದಿಂದ ಹೊರಟ ಬೈಕ್ ರ್ಯಾಲಿ ಮಾಲೂರಿಗೆ ಬಂದಾಗ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್‌ರ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರ್ಜಾಪುರದತ್ತ ಹೊರಡುವಾಗ ಪೊಲೀಸರೊಂದಿಗೆ ಮಾತಿನ ಚಕಮಕಿ. ಅವರ ವಿನಂತಿಯ ಮೇರೆಗೆ ನಾವು ನಮ್ಮ ಪಥವನ್ನು ಬದಲಾಯಿಸಿದ್ದು. ಕೊಟ್ಟ ಮಾತಿಗೆ ಬದ್ಧವಾಗುವಂತೆ ಕಾಣದಿದ್ದಾಗ ಮಾತಿಗೆ ಮಾತು ಸಹಜವಾಗಿ ಬೆಳೆಯಿತು. ಆದರೆ ಕೊನೆಗೆ ಒಳ್ಳೆಯ ಸಹಕಾರವನ್ನೇ ಕೊಟ್ಟರು. ಅಂದುಕೊಂಡಂತೆ ಸರ್ಜಾಪುರ, ಚಂದಾಪುರಗಳಲ್ಲಿ ಕಾರ್ಯಕರ್ತರು ಸ್ವಾಗತಿಸಿ, ಜಿಗಣಿಗೆ ಬಂದು ಸೇರಿಕೊಂಡೆವು. ನಾಳೆ ನಾವು ಕಾವೇರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪೂರ್ಣ ಬೆಂಬಲ ಸೂಚಿಸಿ ಅದೇ ಹಾದಿಯಲ್ಲಿ ಸಾಗುತ್ತೇವೆ. ಎಲ್ಲಿಯೂ ಕಾರ್ಯಕ್ರಮಗಳನ್ನು ಮಾಡದೇ ಹೋರಾಟಗಾರರೊಂದಿಗೆ ಅಲ್ಲಲ್ಲಿ ಕೆಲವು ಕಾಲ ಕಳೆದು ಚಾಮರಾಜನಗರ ತಲುಪಿಕೊಳ್ಳುತ್ತೇವೆ. ಸಾಧ್ಯವಾದರೆ ಜೊತೆಯಾಗಿ

Comments are closed.