
ಎಲ್ಲರೂ ವಿಮಾನ ಹತ್ತುವಂತೆ ಮಾಡಿದ ಮೋದಿಯ ‘ಉಡಾನ್’!
ಈಗೊಂದು ಹತ್ತು ವರ್ಷಗಳ ಹಿಂದಿನವರೆಗೂ ಸ್ಥಿತಿ ಹೇಗಿತ್ತೆಂದರೆ, ಆಕಾಶದಲ್ಲೆಲ್ಲೋ ವಿಮಾನದ ಶಬ್ದವಾದರೆ ಓಡಿ ಹೋಗಿ, ಮುಖ ಮೇಲೆ ಮಾಡಿ, ಕೈಯ್ಯನ್ನು ಹಣೆಗಿಟ್ಟುಕೊಂಡು, ಕಣ್ಣರಳಿಸಿ ವಿಮಾನ ನೋಡಬೇಕಿತ್ತು. ಜೊತೆಗೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿತ್ತು. ಸಾಮಾನ್ಯರೆಲ್ಲರಿಗೂ ವಿಮಾನವನ್ನು ಪ್ರತ್ಯಕ್ಷವಾಗಿ ಕಾಣುವ ಏಕೈಕ ಸಂದರ್ಭ ಅದಾಗಿತ್ತು. ವಿಮಾನ ಹತ್ತುವುದಿರಲಿ, ಏರ್ಪೋರ್ಟ್ ಹೇಗಿರುತ್ತದೆ ಎಂದು ನೋಡುವುದಕ್ಕೂ ಹತ್ತಿರದಲ್ಲೆಲ್ಲೂ ಏರ್ಪೋರ್ಟ್ ಇರಲಿಲ್ಲ. ವಿಮಾನ ಹತ್ತಿದವನನ್ನು ಯಾವುದೋ ದೊಡ್ದ ಸಾಧನೆ ಮಾಡಿದವನ ರೀತಿಯಲ್ಲಿ ಜನ ನೋಡುವ ಒಂದು ಕಾಲವಿತ್ತು. ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳವರೆಗೂ ಭಾರತದಲ್ಲಿ ಇದೇ ಸ್ಥಿತಿಯಿತ್ತು. ಎಷ್ಟೇ ದೂರವಾದರೂ ಸರಿ, ಜನಸಾಮಾನ್ಯರು…